’ಈ ಭೂಮಿಯ ಮೇಲೆ ಕಿಂಚಿತ್ತೂ ಬರಡು ನೆಲವನ್ನು, ಒಂದೂ ಬರಡು ಮನಸ್ಸನ್ನು ಇರಗೊಡೆವು’ ಎನ್ನುತ್ತಾ ರೈತರ ’ಪ್ರಯೋಗ ಪರಿವಾರ’ಗಳನ್ನು ರಚಿಸಿ ಕಾಲೆಕರೆ ಜಮೀನಿನಲ್ಲಿ ಸುಖೀ ಸಂಸಾರದ ಸೂತ್ರವನ್ನು ರಚಿಸಿಕೊಟ್ಟ ಧೀಮಂತ ಪ್ರೊ.ಶ್ರೀಪಾದ ಡಾಬೊಲ್ಕರ್ ಅವರ ’ಪ್ಲೆಂಟಿ ಫಾರ್ ಆಲ್’ ಪುಸ್ತಕದ ಅನುವಾದಿತ ಕೃತಿ. ಆರ್. ಶೈಲಜಾ ಅನುವಾದಿಸಿದ್ದಾರೆ. ಪ್ರಾಕ್- ಪರಿಸರ ಬೇಸಾಯ(ನ್ಯಾಚೆಕೋ ಫಾರ್ಮಿಂಗ್), ನರ್ಸರಿ ಸಾಯಿಲ್ ಮುಂತಾದ ಆಸಕ್ತಿಯುತ ಪರಿಕಲ್ಪನೆಗಳನ್ನು ಹುಟ್ಟು ಹಾಕಿ ಇಂಚಿಂಚು ಭೂಮಿಯನ್ನೂ, ಸಂಪೂರ್ಣ ಸೂರ್ಯಪ್ರಕಾಶವನ್ನೂ ಬಳಕೆ ಮಾಡಿಕೊಂಡು ಸಮೃದ್ಧ ಕೃಷಿ ಮಾಡುವ ದಾರಿಯನ್ನು ತೋರಿಸಿಕೊಟ್ಟವರು ಪ್ರೊ. ಡಾಬೊಲ್ಕರ್. ಕೃಷಿಯಲ್ಲಿ ಗಣಿತದ ಲೆಕ್ಕಾಚಾರವನ್ನು ಅಳವಡಿಸಿ, ಅಗೋಚರ ಪ್ರಕೃತಿಯ ವಿದ್ಯಮಾನಗಳನ್ನು ಹಿಡಿದಿಟ್ಟು ಕೃಷಿಯಲ್ಲಿ ಅಳವಡಿಸಿದ ಧೀಮಂತರು.
ಸಕಲರಿಗೂ ಸಮೃದ್ಧಿ
₹100.00Price
