top of page
ಬದುಕು ಬೇಸಾಯ

ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕು ಎಳವತ್ತಿ ಗ್ರಾಮದ ಧೀಮಂತ ಸಾವಯವ ಕೃಷಿಕ ಡಿ. ಡಿ. ಭರಮಗೌಡ್ರ ಅವರ ಜೀವನ ಚರಿತ್ರೆಯ ಮೂಲಕ ಉತ್ತರ ಕರ್ನಾಟಕದ ಕೃಷಿ ಚರಿತ್ರೆಯನ್ನು ಹಸಿರು ಕ್ರಾಂತಿಯ ಮುಂಚಿನ ಸಮಯದಿಂದಲೂ ಹಿಡಿದಿಡುವ ಸಮಗ್ರ ಕೃತಿ ಇದಾಗಿದೆ. ತಮ್ಮ ಪ್ರದೇಶಕ್ಕೆ ರಾಸಾಯನಿಕ ಕೃಷಿಯನ್ನು ತಂದ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುವ ಭರಮಗೌಡ್ರ ಅವರು ನಂತರ ಪರ್ಯಾಯದ ಹುಡುಕಾಟದಲ್ಲಿ ತೊಡಗಿ ಈ ನಾಡುಕಂಡ ಅತ್ಯುತ್ತಮ ಸಾವಯವ ಕೃಷಿಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುವ ಅವರ ಮಹಾನ್ ಪಯಣದ ಜಾಡು ಹಿಡಿದು ಹೊರಟಿದೆ ಈ ಕೃತಿ. ಭಾಗ-1– ’ಬದುಕು’ ಒಟ್ಟು 4 ಅಧ್ಯಾಯಗಳನ್ನು ಒಳಗೊಂಡಿದ್ದರೆ ಭಾಗ-2 ’ಬೇಸಾಯ’ ಭರಮಗೌಡ್ರ ಅವರ ಕೃಷಿ ಜ್ಞಾನ ಬತ್ತಳಿಕೆಯಿಂದ ಹೊರಟ 20 ಲೇಖನಗಳನ್ನು ಒಳಗೊಂಡಿದೆ.  ಕೊನೆಯಲ್ಲಿ ಅಪರೂಪದ ಸಂದರ್ಭಗಳ ಚಿತ್ರಪಟವಿದೆ. 2016 ರ ಸಾಲಿನ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಇನ್ಫೋಸಿಸ್ ಸ್ಥಾಪಿತ ಪ್ರಶಸ್ತಿ ಇದರ ನಿರೂಪಕಿ ವಿ. ಗಾಯತ್ರಿ ಅವರಿಗೆ ದೊರೆತಿದೆ. 

ಬದುಕು ಬೇಸಾಯ

₹225.00Price
Quantity
    bottom of page