top of page

ಸಾವಯವ ಕೃಷಿ ಮಾಡುತ್ತಿದ್ದಾಗ್ಯೂ ನಮ್ಮ ಬೆಳೆಗಳೇಕೆ ಆರೋಗ್ಯಕರವಾಗಿಲ್ಲ, ಮಣ್ಣೇಕೆ ಫಲವತ್ತಾಗಿಲ್ಲ ಎಂಬ ಆಸ್ಟ್ರಿಯಾ ದೇಶದ ರೈತರ ಪ್ರಶ್ನೆಗೆ ಉತ್ತರವಾಗಿ ಮಹಾನ್ ದಾರ್ಶನಿಕ ರುಡೋಲ್ಫ್ ಸ್ಟೀನರ್ 1920 ರಲ್ಲಿ 8  ಉಪನ್ಯಾಸಗಳನ್ನು ನೀಡುತ್ತಾರೆ. ಅದೇ ಜೀವಚೈತನ್ಯ ಕೃಷಿ. ಸೈದ್ಧಾಂತಿಕ ಮತ್ತು ಪ್ರಾಯೋಗಿಕಗಳೆರಡರ ಹದವಾದ ಮಿಶ್ರಣವಾದ ಈ ಉಪನ್ಯಾಸಗಳಲ್ಲಿ ವಿವಿಧ ತಯಾರಿಕೆಗಳಿದ್ದು ಆಕಾಶೀಯ ಶಕ್ತಿಗಳ ಜೊತೆ ಮಣ್ಣಿಗೆ ಸಂಪರ್ಕ ಬೆಸೆಯುವ ವಿಧಾನಗಳಿವೆ. ಜೀವಚೈತನ್ಯ ಕೃಷಿಯನ್ನು ಭಾರತದಲ್ಲಿ ಪಸರಿಸಿದ ನ್ಯೂಜಿಲೆಂಡ್ ಮೂಲದ ಪೀಟರ್ ಪ್ರಾಕ್ಟರ್ ಅವರು ರುಡೋಲ್ಫ್ ಸ್ಟೀನರ್ ಅವರ  8 ಉಪನ್ಯಾಸಗಳನ್ನು ಸರಳವಾಗಿ ಜನಸಮೂಹಕ್ಕೆ ತಲುಪಿಸಿದ ಧೀಮಂತರು. ಅವರ ಇಂಗ್ಲಿಷ್ ಪುಸ್ತಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಧರಿಸಿ ಈ ಕನ್ನಡ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಒಟ್ಟು 10 ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕ ಜೀವಚೈತನ್ಯ ಕೃಷಿ ಹರಿಕಾರರಾದ ಜೈಸನ್ ಜೆರೋಮ್, ಸುಜಿತ್ ಚಕ್ರವರ್ತಿ ಅವರ ತರಬೇತಿಯ ಮಹತ್ವದ ಭಾಗಗಳನ್ನೂ ಒಳಗೊಂಡಿದೆ. 

ಜೀವಚೈತನ್ಯ ಕೃಷಿ

₹100.00Price
Quantity
    bottom of page